
ಐದು ವರ್ಷಕ್ಕೊಮ್ಮೆ ನಡೆಯುವ ಸುಕ್ಷೇತ್ರ ಸೂಳೇಭಾವಿಯ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಹೆಸರುವಾಸಿಯಾಗಿದ್ದು, 2025ರ ಮಾರ್ಚ್ ತಿಂಗಳಲ್ಲಿ ಮಂಗಳವಾರ ದಿನಾಂಕ 18/3/25 ರಿಂದ ಬುಧವಾರ ದಿನಾಂಕ 26/03/25 ರ ವರೆಗೆ ವಿಜೃಂಭಣೆಯಿಂದ ನೆರವೇರಲಿದೆ ಎಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ತಿಳಿಸಿದೆ.

ಜಾತ್ರೆಯ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ
ಮಂಗಳವಾರ ದಿ.18-03-2025 ರಂದು ಬಡಿಗೇರ ಮನೆಯಲ್ಲಿ ಶ್ರೀದೇವಿಯ ಪ್ರತಿಷ್ಠಾಪನೆ ಹಾಗೂ ಸಂಜೆ 5 ಗಂಟೆಯಿಂದ ಶ್ರೀದೇವಿಯ ಉಡಿ ತುಂಬುವುದು ಹಾಗೂ ರಾತ್ರಿಯಿಂದ ಊರಲ್ಲಿ ಹೊನ್ನಟ ಪ್ರಾರಂಭ.
ಬುಧವಾರ ದಿ. 19-03-2025 ರಂದು ಶ್ರೀದೇವಿಯ ಊರಲ್ಲಿ ಹೊನ್ನಾಟ ಆಡಿ ಸಾಯಂಕಾಲ ಜಾತ್ರಾ ದೇವಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪನೆ.
ಗುರುವಾರ ದಿ. 20-03-2025 ರಿಂದ 26-03-2024 ರ ವರೆಗೆ ಜಾತ್ರಾ ಮಹೋತ್ಸವ
ಶುಕ್ರವಾರ ದಿ. 21-03-2025 ರಂದು ದೇವಿಗೆ ಕಾಣಿಕೆ ಸಲ್ಲಿಸುವುದು ಹಾಗೂ ಉಡಿ ತುಂಬುವುದು ಇತ್ಯಾದಿ
ಬುಧವಾರ ದಿ. 26-03-2025 ರಂದು ಸಾಯಂಕಾಲ ಶ್ರೀ ದೇವಿಯ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳುವುದು
9 ದಿನ ಜಾತ್ರೆಯು ಜರುಗಲಿದ್ದು ಜಾತ್ರೆಯ ದಿವಸಗಳಲ್ಲಿ ಬೈಲಾಟ, ನಾಟಕ, ಜಾಹೀರಗಾನ, ಭಜನೆ ಹಾಗೂ ಇನ್ನಿತರ ಮನರಂಜನೆ ಕಾರ್ಯಕ್ರಮಗಳು ಜರುಗುವವು

ಭಕ್ತಾದಿಗಳು ಶ್ರೀ ದೇವಿಯ ಆಶೀರ್ವಾದ ಪಡೆದು ಕೃತಾರ್ಥರಾಗಿ
ಭಕ್ತಾದಿಗಳು ಶ್ರೀ ದೇವಿಯ ಜಾತ್ರೆಯ ವಿವರಗಳನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳಿ
